ಗಂಡಸಿಗೆ ತಕ್ಷಣ ಎರಡನೇ ಸಲ ಸೆಕ್ಸ್‌ ಮಾಡೋಕಾಗಲ್ಲ ಯಾಕೆ? ಅದು ಸಾಧ್ಯವೇ?

ಗಂಡಸು ಒಮ್ಮೆ ಸ್ಖಲನಗೊಂಡ ಬಳಿಕ ಕೆಲಕಾಲದ ವರೆಗೆ ಮತ್ತೊಮ್ಮೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲಾರ. ಏಕೆಂದರೆ ಶಿಶ್ನ ನಿಮಿರುವುದಿಲ್ಲ. ಎಷ್ಟೇ ಪ್ರಚೋದಿಸಿದರೂ ಶಿಶ್ನ ಆಗ ಚಿಗುರಲಾರದು. ಆದರೆ ಈ ಅವಧಿ ಕಡಿಮೆಗೊಳಿಸಬಹುದಾ?

ಒಮ್ಮೆ ಸೆಕ್ಸ್‌ ಮಾಡಿದ ಬಳಿಕ, ಇನ್ನೊಮ್ಮೆ ಸಂಭೋಗಿಸಬೇಕು ಎಂದರೆ ಪುರುಷನಿಂದ ಅದು ಸಾಧ್ಯವಾಗಲಾರದು. ಸ್ತ್ರೀಗೆ ಅದು ಸಾಧ್ಯ. ಏಕೆಂದರೆ ಆಕೆ ಬಹು ತುರೀಯಾವಸ್ಥೆಗಳನ್ನು ಅನುಭವಿಸಬಲ್ಲಳು. ಆದರೆ ಗಂಡಸು ಒಮ್ಮೆ ಸ್ಖಲನಗೊಂಡ ಬಳಿಕ ಕೆಲಕಾಲದವರೆಗೆ ಮತ್ತೊಮ್ಮೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲಾರ. ಯಾಕೆಂದರೆ ಶಿಶ್ನ ನಿಮಿರುವುದಿಲ್ಲ. ಎಷ್ಟೇ ಪ್ರಚೋದಿಸಿದರೂ ಶಿಶ್ನ ಆಗ ಚಿಗುರಲಾರದು.

ಎಷ್ಟು ಹೊತ್ತು ಹೀಗಿರುತ್ತದೆ? ಎಷ್ಟು ಹೊತ್ತಿನ ಬಳಿಕ ಗಂಡಸು ಮತ್ತೊಮ್ಮೆ ಮಿಲನ ಮಹೋತ್ಸವಕ್ಕೆ ಸಿದ್ಧನಾಗಬಲ್ಲ? ಇದು ಎಲ್ಲ ಗಂಡಸರಿಗೂ ಒಂದೇನಾ? ಅಥವಾ ಬೇರೆ ಬೇರೆ ಗಂಡಸರ ಸಾಮರ್ಥ್ಯ ಬೇರೆ ಬೇರೆ ಥರ ಇರುತ್ತದಾ? ನೋಡೋಣ.

ಲೈಂಗಿಕ ಮಿಲನದ ತುಟ್ಟ ತುದಿಯಲ್ಲಿ ಗಂಡಸು ತನ್ನ ವೀರ್ಯವನ್ನು ಚಿಮ್ಮಿಸುತ್ತಾನೆ. ಆತನ ಲೈಂಗಿಕತೆಯ ಆತ್ಯಂತಿಕ ಸುಖದ ಕ್ಷಣ ಅದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಆತನಲ್ಲಿ ಡೋಪಮೈನ್‌ ಎಂಬ ಆನಂದದ ಹಾರ್ಮೋನ್‌ ಸೇರಿದಂತೆ ಅನೇಕ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಆತನ ದೇಹದ ಕಣಕಣವೂ ಆನಂದವನ್ನು ಹೊಂದುತ್ತದೆ. ಇದು ಪುರುಷನ ಪರಾಕಾಷ್ಠೆಯ ಕ್ಷಣ.

ಇದರ ನಂತರದ ಅವಧಿಯೇ ವಕ್ರೀಭವನದ ಅವಧಿ. ಈ ಅವಧಿಯಲ್ಲಿ ಪುರುಷ ಮತ್ತೊಮ್ಮೆ ನಿಮಿರುವಿಕೆ ಹೊಂದಲು ಸಾಧ್ಯವಿಲ್ಲ. ಶಿಶ್ನ ನಿಮಿರುವುದಿಲ್ಲವಾದ್ದರಿಂದ ಮಿಲನದಲ್ಲಿ ತೊಡಗಲೂ ಸಾಧ್ಯವಾಗದು. ಆದರೆ ಸ್ತ್ರೀಗೆ ಹೀಗಲ್ಲ. ಆಕೆಯು ಮಿಲನಕ್ಕೆ ಸಿದ್ಧಳಾಗದೆ ಹೋದರೂ ಪುರುಷನು ಆಕೆಯನ್ನು ಬಳಸಿಕೊಳ್ಳಲು ಸಾಧ್ಯವಿದೆ. ಆದರೆ ಪುರುಷನನ್ನು ಹೀಗೆ ಬಳಸಿಕೊಳ್ಳಲು ಸಾಧ್ಯವಿಲ್ಲ.

ಸ್ತ್ರೀಯ ಪರಾಕಾಷ್ಠೆಯೂ ಪುರುಷನಿಗಿಂತ ಭಿನ್ನ. ಆಕೆ ಒಂದೇ ಸಲದ ಸೆಕ್ಸ್‌ನಲ್ಲಿ ಅನೇಕ ಸಲ ಪರಾಕಾಷ್ಠೆ ಹೊಂದಬಹುದು. ಅಂದರೆ ಪುರುಷನು ದೀರ್ಘಕಾಲ ಸೆಕ್ಸ್‌ ಮುಂದುವರಿಸಬಲ್ಲವನಾದರೆ ಆತ ಸ್ಖಲನ ಹೊಂದಲು ಮೊದಲು ಆಕೆ ಹಲವು ಪರಾಕಾಷ್ಠೆಗಳನ್ನು ಅನುಭವಿಸಬಹುದು. ಆಕೆಗೆ ಗಂಡಸಿನಂಥ ರಿಫ್ರಾಕ್ಟರಿ ಪೀರಿಯೆಡ್‌ ಕೂಡ ಇರೊಲ್ಲ. ಹೆಣ್ಣಿನ ಜನನಾಂಗಗಳು ಲೈಂಗಿಕ ಚಟುವಟಿಕೆಯ ವೇಳೆ ಒದ್ದೆಯಾಗಿರುವುದರಿಂದ, ಆಕೆ ನಂತರ ಮಾನಸಿಕವಾಗಿ ಸೆಕ್ಸ್‌ಗೆ ಇಷ್ಟಪಡದಿದ್ದರೂ ಆಕೆಯ ದೇಹ ಅದನ್ನು ಸ್ವೀಕರಿಸಬಹುದು.

ಹಾಗಾದರೆ ಗಂಡಸಿನಲ್ಲಿ ಈ ಸಂದರ್ಭದಲ್ಲಿ ಏನಾಗುತ್ತದೆ?

* ಗಂಡಸು ಸ್ಖಲನದೊಂದಿಗೆ ತೃಪ್ತಿ ಹೊಂದುತ್ತಾನೆ. ಆಗ ಅವನಿಗೆ ಆಯಾಸ ಉಂಟಾಗುತ್ತದೆ. ಆತನ ದೇಹ ಮತ್ತೊಂದು ಆಯಾಸದ ಚಟುವಟಿಕೆಯನ್ನು ಮಾಡಲು ಇಷ್ಟಪಡುವುದಿಲ್ಲ.

* ಪುರುಷನಲ್ಲಿ ಈ ಅವಧಿಯಲ್ಲಿ ಗರಿಷ್ಠ ಟೆಸ್ಟೋಸ್ಟಿರಾನ್‌ ಹಾರ್ಮೋನ್‌ ಸ್ರವಿಸಿರುತ್ತದೆ. ತನ್ನ ಕೆಲಸವನ್ನೂ ಮುಗಿಸಿರುತ್ತದೆ. ಇನ್ನೊಮ್ಮೆ ಟೆಸ್ಟೋಸ್ಟಿರಾನ್‌ ಸ್ರವಿಸಲು ಒಂದಷ್ಟು ಕಾಲ ಬೇಕು. ಹೀಗಾಗಿ ಈ ಅವಧಿಯಲ್ಲಿ ಪುರುಷಾಯುಧ ನಿಮಿರುವುದಿಲ್ಲ.

* ವಕ್ರೀಭವನದ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವರಿಗೆ ಅದು ಕೆಲವೇ ನಿಮಿಷಗಳಿದ್ದರೆ, ಇನ್ನು ಕೆಲವರಿಗೆ ಅದು 24 ಗಂಟೆಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಸ್ತರಿಸಬಹುದು.

* ಸ್ಖಲನದ ಬಳಿಕ ಪುರುಷನ ದೇಹದಲ್ಲಿ ಪ್ರೊಲ್ಯಾಕ್ಟಿನ್‌ ಎಂಬ ಹಾರ್ಮೋನ್‌ ಸ್ರವಿಸುತ್ತದೆ. ಇದು ದೇಹವನ್ನು ಶಾಂತಗೊಳಿಸುತ್ತದೆ. ಈ ಹಾರ್ಮೋನ್‌ನ ಸ್ರಾವ ವಯಸ್ಸಾದಂತೆ ಹೆಚ್ಚು. ಹೀಗಾಗಿ, ವಯಸ್ಸಾದ ಗಂಡಸರಲ್ಲಿ ರಿಫ್ರಾಕ್ಟರಿ ಪೀರಿಯಡ್‌ ಅಧಿಕ. ಅದೇ ತರುಣರು, ಹೊಸದಾಗಿ ಸೆಕ್ಸ್‌ ಮಾಡುತ್ತಿರುವವರು, ಉತ್ಸಾಹದಿಂದ ಒಂದೇ ಸಲಕ್ಕೆ ಎರಡು- ಮೂರು ಬಾರಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳಬಲ್ಲರು! ಇದು ಮದುವೆಯಾದ ಎಲ್ಲರಿಗೂ ಗೊತ್ತಿರುವುದೇ.

ಈ ಅವಧಿಯನ್ನು ಕಡಿಮೆ ಮಾಡಬಹುದೇ?

ಹೌದು, ಇದನ್ನು ಕಡಿಮೆ ಮಾಡಲು, ಒಂದೇ ರಾತ್ರಿಯಲ್ಲಿ ಹೆಚ್ಚು ಬಾರಿ ಸುಖ ಹೊಂದಲು ಸಾಧ್ಯ. ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಅಂಶಗಳೇ ಇಲ್ಲೂ ಕೆಲಸ ಮಾಡುತ್ತವೆ. ಉತ್ತಮ ಲೈಂಗಿಕ ಆರೋಗ್ಯಕ್ಕೆ ಮೂಲ ಉತ್ತಮ ದೇಹಾರೋಗ್ಯ, ಹೃದಯರಕ್ತನಾಳದ ಆರೋಗ್ಯ.

* ವಾಕಿಂಗ್, ಓಟ ಅಥವಾ ಏರೋಬಿಕ್ಸ್‌ನಂತಹ ಹೃದಯರಕ್ತನಾಳದ ವ್ಯಾಯಾಮವನ್ನು ಸದಾ ಮಾಡುವುದು.

* ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು.

* ಪೌಷ್ಟಿಕಾಂಶಯುಕ್ತವಾದ ಆಹಾರವನ್ನು ಸೇವಿಸುವುದು.

* ಮಧುಮೇಹದಂತಹ ಕಾಯಿಲೆಗಳು ಬರದಂತೆ, ಬಂದರೂ ಹಿಡಿತದಲ್ಲಿರುವಂತೆ ನೋಡಿಕೊಳ್ಳುವುದು.